VIDEO: ದಿಢೀರ್​ ಕುಸಿದು ಬಿದ್ದ ರಾಹುಲ್​ ಗಾಂಧಿ ಇದ್ದ ವೇದಿಕೆ.. ಆಮೇಲೇನಾಯ್ತು?

author-image
Veena Gangani
Updated On
VIDEO: ದಿಢೀರ್​ ಕುಸಿದು ಬಿದ್ದ ರಾಹುಲ್​ ಗಾಂಧಿ ಇದ್ದ ವೇದಿಕೆ.. ಆಮೇಲೇನಾಯ್ತು?
Advertisment
  • ಲಾಲು ಪ್ರಸಾದ್ ಅವರ ಪುತ್ರಿ ಮಿಸಾ ಭಾರ್ತಿರ ಪ್ರಚಾರದ ವೇಳೆ ಅವಘಡ
  • ಚುನಾವಣೆಯ ಪ್ರಚಾರದಲ್ಲಿ ಸಖತ್​ ಬ್ಯುಸಿಯಾಗಿರೋ ಕಾಂಗ್ರೆಸ್ ನಾಯಕ
  • ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ರಾಹುಲ್ ಗಾಂಧಿ ವಿಡಿಯೋ

ಪಾಟ್ನಾ: ಲೋಕಸಭೆ ಚುನಾವಣೆ ಪ್ರಚಾರದ ಕಾರ್ಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಖತ್​ ಬ್ಯುಸಿಯಾಗಿದ್ದಾರೆ. ಇಂದು ರಾಹುಲ್ ಗಾಂಧಿ ಅವರು ಬಿಹಾರದಲ್ಲಿ ಅಬ್ಬರ ಪ್ರಚಾರದ ನಡೆಸಿದ್ರು. ಪ್ರಚಾರದ ವೇಳೆ ರಾಹುಲ್ ಗಾಂಧಿಯವರು ಇದ್ದ ವೇದಿಕೆ ದಿಢೀರ್​​ ಕುಸಿದಿದೆ.

ಇದನ್ನೂ ಓದಿ:‘ನಾನು ಡಿಪ್ರೆಶನ್‌ಗೆ ಹೋಗಿ ಐಸೋಲೇಷನ್‌ಗೆ ಒಳಗಾಗಿದ್ದೆ’- ಪ್ರಜ್ವಲ್​ ರೇವಣ್ಣ ವಿಡಿಯೋದಲ್ಲಿ ಹೇಳಿದ್ದೇನು?

publive-image

ಹೌದು, ಲೋಕಸಭೆ ಚುನಾವಣೆಗೆ ಇನ್ನೂ ಒಂದು ಹಂತದ ಮತದಾನ ಮಾತ್ರ ಬಾಕಿ ಉಳಿದಿದೆ. ಜೂನ್​ 1 ರಂದು 7ನೇ ಹಂತದ ಮತದಾನ ನಡೆಯಲಿದ್ದು, ಉತ್ತರಪ್ರದೇಶದ, ಪಶ್ಚಿಮಬಂಗಾಳದ, ಕೇಂದ್ರಾಡಳಿತ ಪ್ರದೇಶ ಚಂಡೀಗಢ ಸೇರಿ 13 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಹೀಗಾಗಿ ರಾಜಕೀಯ ನಾಯಕರು ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಅದರಂತೆ ಇಂದು ಪಾಟಲೀಪುತ್ರ ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರ ಪುತ್ರಿ ಮಿಸಾ ಭಾರ್ತಿ ಅವರ ಪರವಾಗಿ ಪ್ರಚಾರ ಮಾಡಲು ಪಾಲಿಗಂಜ್​ಗೆ ರಾಹುಲ್ ಗಾಂಧಿ ಭೇಟಿ ನೀಡಿದ್ದರು. ಇದೇ ವೇಳೆ ಮತಯಾಚನೆ ಮಾಡುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಿಂತುಕೊಂಡಿದ್ದ ವೇದಿಕೆ ಏಕಾಏಕಿ ಕುಸಿದಿದೆ.


">May 27, 2024

ಇನ್ನು, ವೇದಿಕೆ ಕುಸಿಯುತ್ತಿದ್ದಂತೆ ಲಾಲು ಪ್ರಸಾದ್ ಅವರ ಪುತ್ರಿ ಮಿಸಾ ಭಾರ್ತಿ ಅವರು ರಾಹುಲ್ ಗಾಂಧಿ ಅವರ ಕೈಯನ್ನು ಹಿಡಿದು ಪಕ್ಕಕ್ಕೆ ಸರಿಸಿದ್ದಾರೆ. ಅದರಲ್ಲೂ ರಾಹುಲ್​ ಗಾಂಧಿ ಜಿಂದಾಬಾದ್ ಅಂತ ಅಭಿಮಾನಿಗಳು ಕೂಗುತ್ತಿದ್ದಂತೆ ವೇದಿಕೆ ದಿಢೀರ್ ಕುಸಿದಿದೆ. ವೇದಿಕೆ ಕುಸಿದ ಜಾಗದಲ್ಲೇ ಇದ್ದ ರಾಹುಲ್ ಗಾಂಧಿಗೆ ಯಾವುದೇ ತೊಂದರೆ ಉಂಟಾಗಿಲ್ಲ. ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಇದೇ ವಿಡಿಯೋ ನೋಡಿದ ಟ್ರೋಲರ್ಸ್​ ಜಸ್ಟ್​ ಮಿಸ್​​ ರಾಹುಲ್​ ಗಾಂಧಿ ಅಂತ ಸಖತ್​ ಟ್ರೋಲ್​ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment